Job Description: ಬೀಜಿಂಗ್ : ಭಾರತದ ನೆರೆಯ ರಾಷ್ಟ್ರ ಚೀನಾವು ಬಾಂಗ್ಲಾ ದೇಶದಲ್ಲಿ ಬಹು ಬಿಲಿಯನ್ ಡಾಲರ್ ಮೊತ್ತದಲ್ಲಿ "ಬೆಲ್ಟ್ ಆಯಂಡ್ ರೋಡ್" ಯೋಜನೆ ನಿರ್ಮಿಸುವದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಘೋಷಿಸಿದ್ದಾರೆ. ಇತ್ತೀಚಿಗೆ ನಡೆದ ಚೀನ- ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧದ 45ನೇ ವಾರ್ಷಿಕೋತ್ಸವ ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರು ಈ ಯೋಜನೆ ಘೋಷಿಸಿದ್ದು, ಈ ಯೋಜನೆ ಮೂಲಕ ಬಾಂಗ್ಲಾ- ಚೀನಾ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಇದೆ ವೇಳೆ ಅವರು ತಿಳಿಸಿದರು. * ವಾಣಿಜ್ಯ ವ್ಯಾಪಾರ ಉದ್ದೇಶದಿಂದ ಏಷ್ಯಾ- ಯುರೋಪ್ ನಿಂದ ಆಫ್ರಿಕದವರೆಗೆ ಒಂದೇ ರಸ್ತೆ ನಿರ್ಮಿಸುವ ಮುಖ್ಯ ಯೋಜನೆ ಇದಾಗಿದೆ. * ಈ ಯೋಜನೆಯ ಮೂಲಕ ಸುಮಾರು 70 ರಾಷ್ಟ್ರಗಳಿಗೆ ರಸ್ತೆ ಸಂಪರ್ಕ ಸಾಧಿಸುವುದು ಚೀನಾದ ಮುಖ್ಯ ಉದ್ದೇಶವಾಗಿದೆ.