Job Description: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ "ಹರ್ ಘರ್ ಜಲ್ ಯೋಜನೆ"(ಪ್ರತಿ ಮನೆಗೆ ನೀರು) ಯಾ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು 14 ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಈ ಯೋಜನೆಯ ಮೂಲಕ ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರೊದಗಿಸುವ ಮುಖ್ಯ ಉದ್ದೇಶಹೊಂದಿದೆ. ಇನ್ನು ಈ ಯೋಜನೆಯ ಜಾರಿಯಲ್ಲಿ ಕರ್ನಾಟಕ ರಾಜ್ಯವು ಕೇವಲ ಶೇ.29 ಗುರಿ ಸಾಧಿಸಿದ್ದು, ದೇಶದ ರಾಜ್ಯಗಳ ಪೈಕಿ 14ನೇ ಸ್ಥಾನ ಪಡೆದಿದೆ. * ಪ್ರಧಾನಿ ನರೇಂದ್ರ ಮೋದಿಯವರು 2019ರ ಆಗಸ್ಟ್ 15 ರ ಭಾಷಣದಲ್ಲಿ ಜಲಜೀವನ ಅಭಿಯಾನ ಘೋಷಿಸಿದ್ದರು, ಹಾಗು ಈ ಯೋಜನೆಯ ಮೂಲಕ ದೇಶದ ಸುಮಾರು 19 ಕೋಟಿ ಕುಟುಂಬಗಳಿಗೆ ನೇರವಾಗಿ ನೀರೊದಗಿಸುವದಾಗಿ ಹಾಗು ಯೋಜನೆಯನ್ನು 2024 ರೊಳಗಾಗಿ ಯೋಜನೆ ಪೂರ್ಣಗೊಳಿಸುವ ಕುರಿತು ತಿಳಿಸಿದ್ದರು. * ಗೋವಾ ಎಲ್ಲ 2.63 ಲಕ್ಷ ಮನೆಗಳಿಗೆ ನೀರು ಒದಗಿಸುವ ಮೂಲಕ ಇತ್ತೀಚಿಗಷ್ಟೇ ಶೇ.100 ಗುರಿ ಸಾಧಿಸಿದೆ.