Job Description: ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ಪಟ್ಟಾನಂ ಗ್ರಾಮದ ವ್ಯಾಪ್ತಿಯ ಮನೆಯೊಂದರಲ್ಲಿ ಪ್ರಾಚೀನ ಕಾಲದ ರೋಮನ್ ಸಾಮ್ರಾಜ್ಯಕ್ಕೆ ಸಂಬಂದಿಸಿದ ಕುರುಹುಗಳು ಪತ್ತೆಯಾಗಿವೆ. ಪಟ್ಟಾನಂ ಗ್ರಾಮದ ಮನೆಯ ಹಿತ್ತಿಲಿನಲ್ಲಿ ಸಂಶೋಧನೆ ನಡೆಸಿದಾಗ 1.2 ಸೆಂಟಿಮೀಟರ್ ಉದ್ದದ ಸ್ಫಿಂಕ್ಸ್ (ಹೆಣ್ಣಿನ ಮುಖ ಮತ್ತು ಸಿಂಹದ ದೇಹವಿರುವ ರೆಕ್ಕೆಯುಳ್ಳ ಆಕೃತಿ) ಪತ್ತೆಯಾಗಿದೆ. ಈ ಮಾದರಿಯು ರೋಮನ್ ಸಾಮ್ರಾಜ್ಯದ ಮೊದಲನೇ ಚಕ್ರವರ್ತಿ ಅಗಸ್ಟಸ್ ಸೀಸರ್ ನ ಕಾಲಕ್ಕೆ ಸೇರಿದ್ದಾಗಿ ತಿಳಿದು ಬಂದಿದೆ. ಇನ್ನು ಪೆರಿಯಾರ್ ನದಿ ಹಿನ್ನೀರಿನ ವ್ಯಾಪ್ತಿಯಲ್ಲಿ ಈ ಮನೆಯಿರುವ ಕಾರಣ ಈ ಪ್ರದೇಶದಿಂದ ರೋಮ್ವರೆಗೆ ಇತಿಹಾಸ ಕಾಲದಲ್ಲಿ ವ್ಯಾಪಾರ ಸಂಬಂಧಗಳಿದ್ದಿರುವ ಸಾಧ್ಯತೆ ಇದೆ.