Job Description: ದುಬೈ: ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ದುಬೈ ಇದೀಗ ಮತ್ತೊಂದು ನೂತನ ದಾಖಲೆಗೆ ಸಿದ್ದಗೊಂಡಿದೆ, ಇಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ದೊಡ್ಡ ಕಾರಂಜಿಯನ್ನು ಇದೇ ತಿಂಗಳ 22ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವದು. * ದುಬೈನ ಪಾಯಿಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಈ ಕಾರಂಜಿಯು ಒಟ್ಟು 14,000 ಚದರ ಅಡಿಯಷ್ಟು ಪ್ರದೇಶದಲ್ಲಿ ವ್ಯಾಪಿಸಿದೆ. * ಕಾರಂಜಿ ನಿರ್ಮಾಣಕ್ಕೆ ಬಳಸಿರುವ 'ಸೂಪರ್ ಶೂಟರ್'ಗಳು 105 ಮೀಟರ್ನಷ್ಟು ಎತ್ತರವಾಗಿವೆ. * 3,000ಕ್ಕೂ ಅಧಿಕ ಎಲ್ಇಡಿ ದೀಪಗಳನ್ನು ಈ ಕಾರಂಜಿ ಒಳಗೊಂಡಿದೆ. * ಪ್ರತಿದಿನ ರಾತ್ರಿ 7 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಖಲೀಜಿ, ಪಾಪ್, ಕ್ಲಾಸಿಕ್ ಹಾಗೂ ಪಾಶ್ಚಿಮಾತ್ಯ ದೇಶಗಳ ಪ್ರಸಿದ್ಧ ಹಾಡುಗಳು ಮೂಲಕ ಪ್ರಕ್ಷಕರ ಮನತಣಿಸಲಿದೆ.