Job Description: ಮಣಿಪಾಲ: ಇಡೀ ವಿಶ್ವದಲ್ಲೇ ಅತ್ತ್ಯುನ್ನತ ಪ್ರಶಸ್ತಿ ಎನಿಸಿರುವ ಈ ವರ್ಷದ ಮೊದಲ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಔಷದಿ ವಿಭಾಗದಲ್ಲಿ ಹಾರ್ಬೆ ಜೆ. ಆಲ್ಟರ್, ಮೈಕೆಲ್ ಹೌಟನ್ ಮತ್ತು ಚಾಲ್ಸ್ ಎಂ. ರೈಸ್ ಎಂಬ ಮೂರು ವಿಜ್ಞಾನಿಗಳಿಗೆ ಜಂಟಿಯಾಗಿ ನೀಡಲಾಗಿದೆ. ಈ ಮೂವರು ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆ ನಡೆಸುವ ಮೂಲಕ ಹೆಪಟೈಟಿಸ್ ಸಿ ವೈರಸ್ ಅನ್ನು ಕಂಡುಹಿಡಿದಿದ್ದಾರೆ. ನೊಬೆಲ್ ಪ್ರಶಸ್ತಿ : ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಹಾಗೂ ಔಷದ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದರೆ ಗಣಿತ ಕ್ಷೇತ್ರಕ್ಕೆ ಈ ಪುರಸ್ಕಾರವನ್ನು ಕೊಡಲಾಗುವುದಿಲ್ಲ.