Job Description: ನವದೆಹಲಿ: ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳು ಜಂಟಿಯಾಗಿ ಹೈಟೆಕ್ ಶಸ್ತ್ರಾಸ್ತ್ರ ಉತ್ಪಾದಿಸಲು ನಿರ್ಧರಿಸಿದ್ದು, ಉಭಯ ದೇಶಗಳ ರಕ್ಷಣಾ ಸಚಿವಾಲಯಗಳು ಸಬ್ ರ್ವಂಗ್ ಗ್ರೂಪ್ (SWG) ರಚಿಸಿಕೊಂಡಿವೆ. ಉಭಯ ರಾಷ್ಟ್ರಗಳ ತಂತ್ರಜ್ಞಾನ, ಅಭಿವೃದ್ಧಿ ಮತ್ತು ಉತ್ಪಾದನೆ, ತಂತ್ರಜ್ಞಾನ ಭದ್ರತೆ, ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಜಂಟಿ ರಫ್ತು ಸೇರಿ ಹಲವು ಅಂಶಗಳನ್ನು ಎಸ್ಡಬ್ಲ್ಯುಜಿ ಸಂಸ್ಥೆಯು ನಿರ್ವಹಿಸಲಿದ್ದು, ಭಾರತದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಸಂಜಯ್ ಜಾಜು ಮತ್ತು ಇಸ್ರೇಲ್ನ ಇಯಾಲ್ ಕ್ಯಾಲಿಫ್ SWG ನ ನೇತೃತ್ವ ವಹಿಸಿಕೊಂಡಿದ್ದಾರೆ.