Job Description: ನವದೆಹಲಿ: ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ತಮ್ಮ 82 ವರ್ಷ ವಯಸ್ಸಿನಲ್ಲಿ ಬಹುಅಂಗಾಂಗ ವೈಫಲ್ಯದಿಂದ ಬಳಲಿ ಅಸುನೀಗಿದರು. ರಾಜಸ್ತಾನದ ಬರ್ಮರ್ ಜಿಲ್ಲೆಯ ಜಸೋಲ್ ಗ್ರಾಮದಲ್ಲಿ ಜನವರಿ 3, 1938ರಲ್ಲಿ ಜಸ್ವಂತ್ ಜನಿಸಿದರು. 1950 ಮತ್ತು 60 ರ ದಶಕಗಳಲ್ಲಿ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ 1970ರಲ್ಲಿ ಮೇಜರ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಸೇರ್ಪಡೆಗೊಂಡು BJP ಆಡಳಿತ ಅವಧಿಯಲ್ಲಿ ಭಾರತ ಸರ್ಕಾರದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಮತ್ತು ಹಣಕಾಸು ಇಲಾಖೆಯ ಸಚಿವರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇವರು ಬಿಜೆಪಿಯ ನಾಯಕರಾಗಿ ಒಟ್ಟು ಒಂಭತ್ತು ಬಾರಿ ಸಂಸತ್ಗೆ ಚುನಾಯಿತರಾಗಿದ್ದರು