Job Description: ನವದೆಹಲಿ: ಭಾರತದ ಖ್ಯಾತ ಅರ್ಥಶಾಸ್ತ್ರಜ್ಞೆ, ಪದ್ಮಭೂಷಣ ಡಾ. ಇಶರ್ ಅಹ್ಲುವಾಲಿಯ ಅವರು ಅನಾರೋಗ್ಯ ಕಾರಣ ದಿನಾಂಕ 26 ಸೆಪ್ಟೆಂಬರ್ 2020 ರಂದು ತಮ್ಮ 74 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. * ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇವರ ಸೇವೆಗಾಗಿ 2009ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. * ಇವರು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷರಾದ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಅವರನ್ನು ತಮ್ಮ ಜೀವನ ಸಂಗತಿಯನ್ನಾಗಿಸಿಕೊಂಡಿದ್ದರು. * ದೆಹಲಿಯ ಚಿಂತನ ಚಿಲುಮೆ ಇಂಡಿಯನ್ ಕೌನ್ಸಿಲ್ ಫಾರ್ ರೀಸರ್ಚ್ ಆನ್ ಇಂಟರ್ನ್ಯಾಷನಲ್ ಎಕನಾಮಿಕ್ ರಿಲೇಷನ್ಸ್ (ಐಸಿಆರ್ಐಇಆರ್)ನ ಅಧ್ಯಕ್ಷೆಯಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.