Job Description: ಧಾರವಾಡ : ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಕೆ ಬಿ ಗುಡಸಿ ಅವರನ್ನು ನೇಮಿಕ ಮಾಡಿ ರಾಜ್ಯಪಾಲರಾದ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ. ಇಲ್ಲಿಯವರೆಗೆ ಕುಲಪತಿಯಾಗಿ ಸೇವೆಸಲ್ಲಿಸಿದ್ದ ಪ್ರಭಾರಿ ಕುಲಪತಿ ಪ್ರೊ.ಎಂ ವಿಶ್ವನಾಥ ಅವರಿಂದ ನೂತನವಾಗಿ ನೇಮಕಗೊಂಡ ಕುಲಪತಿ ಪ್ರೊ.ಕೆ ಬಿ ಗುಡಸಿ ಅಧಿಕಾರ ಸ್ವೀಕರಿಸಿದರು. - ಪ್ರೊ.ಕೆ.ಬಿ ಗುಡಸಿ ಕರ್ನಾಟಕ ವಿವಿಯ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.