Job Description: ನವದೆಹಲಿ : ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಾಗರ ಸಮರಾಭ್ಯಾಸ "ಜಿಮೆಕ್ಸ್"ನ ನಾಲ್ಕನೆಯ ಆವೃತ್ತಿಯು ಇದೆ ಸೆಪ್ಟೆಂಬರ್ 26 ರಿಂದ 28ವರೆಗೆ ನಡೆಯುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಭಾರತದ ನೌಕಾ ಪಡೆ ಮತ್ತು ಜಪಾನ್ ಸಾಗರ ಸ್ವಯಂ ರಕ್ಷಣಾ ದಳ (JIMSDF) ಜಂಟಿಯಾಗಿ ಉತ್ತರ ಅರಬ್ಬಿ ಸಮುದ್ರದಲ್ಲಿ ಸಾಗರ ಸಮರಾಭ್ಯಾಸ ನಡೆಸುತ್ತ ಬಂದಿವೆ. * ಸಾಗರದ ಭದ್ರತೆಯ ಸಲುವಾಗಿ ಉಭಯ ರಾಷ್ಟ್ರಗಳ ಸಹಕಾರಕ್ಕಾಗಿ 2012ರ ಜನವರಿಯಿಂದ ಜಿಮೆಕ್ಸ್ ಸರಣಿಯ ಸಾಗರ ಸಮರಾಭ್ಯಾಸವನ್ನು ಆಯೋಜಿಸಲಾಗುತ್ತಿದೆ. * ಕೊನೆಯ ಬಾರಿ ಈ ಜಂಟಿ ಸಮರಾಭ್ಯಾಸವು 2018ರ ಅಕ್ಟೋಬರ್ನಲ್ಲಿ ವಿಶಾಖಪಟ್ಟಣದಲ್ಲಿ ಆಯೋಜಿಸಲಾಗಿತ್ತು. * ಉಭಯ ದೇಶಗಳ ನೌಕಾಪಡೆಗಳು ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಉಡಾವಣೆ, ಕ್ರಾಸ್ ಡೆಕ್ ಹಲಿಕಾಪ್ಟರ್ ಕಾರ್ಯಾಚರಣೆ, ಜಲಾಂತರ್ಗಾಮಿ ನೌಕೆಗಳ ನಿಗ್ರಹ, ವೈಮಾನಿಕ ಯುದ್ಧ ಅಭ್ಯಾಸಗಳು ಸೇರಿ ವಿವಿಧ ಕಾರ್ಯತಂತ್ರಗಳು ಜಿಮೆಕ್ಸ್ 20ರಲ್ಲಿ ಪ್ರದರ್ಶನಗೊಳ್ಳಲಿವೆ.