Job Description: ನವದೆಹಲಿ : ಇತ್ತೀಚಿಗೆ ನೆರೆಯ ಶ್ರೀಲಂಕಾ ರಾಷ್ಟ್ರದ ಪ್ರಧಾನಿಯಾದ ಮಹಿಂದಾ ರಾಜಪಕ್ಸ ಆನ್ಲೈನ್ ದ್ವಿಪಕ್ಷೀಯ ಸಮ್ಮೇಳನಕ್ಕೆ ಮೋದಿಯರಿಗೆ ನೀಡಿದ ಆಹ್ವಾನವನ್ನು ಸ್ವೀಕರಿಸಿ ಮೋದಿ ಮಾತುಕತೆ ನಡೆಸಿದರು. ಆನ್ಲೈನ್ ದ್ವಿಪಕ್ಷೀಯ ಮಾತುಕತೆ ನಡೆಸಿದ ಮಡಿಯವರು ಭದ್ರತೆ ಮತ್ತು ಬೆಳವಣಿಗೆ (ಸಾಗರ್) ನೀತಿಯಲ್ಲಿ ಶ್ರೀಲಂಕಾಕ್ಕೆ ಮಹತ್ವ ನೀಡಲಾಗುವದು ಹಾಗೂ ಭಾರತ ಮತ್ತು ಶ್ರೀಲಂಕಾ ಸಂಬಂಧ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಮೋದಿ ಬಣ್ಣಿಸಿದರು. ಇನ್ನು ಭಾರತ ಮತ್ತು ಶ್ರೀಲಂಕಾ ನಡುವಿನ ಬುದ್ಧಿಸ್ಟ್ ಒಪ್ಪಂದವನ್ನು ಉತ್ತೇಜಿಸುವ ಸಲುವಾಗಿ 15 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಇದೆ ವೇಳೆ ಪ್ರಧಾನಿ ಮೋದಿ ಪ್ರಕಟಿಸಿದರು. ಈ ಒಪ್ಪಂದದ ಪ್ರಕಾರ ಉತ್ತರ ಪ್ರದೇಶದ ಕುಶಿನಗರಕ್ಕೆ ಮೊದಲ ಉದ್ಘಾಟನಾ ವಿಮಾನದಲ್ಲಿ ಬರಲಿರುವ ಶ್ರೀಲಂಕಾದ ಬೌದ್ಧ ಯಾತ್ರಾರ್ಥಿಗಳ ನಿಯೋಗವನ್ನು ಭಾರತ ಸತ್ಕರಿಸಲಿದೆ.