Job Description: ನವದೆಹಲಿ : ವೊಡಾಫೋನ್ ಸಮೂಹವು ಭಾರತ ಸರ್ಕಾರದ ವಿರುದ್ಧ ಸುಮಾರು 14,200 ಕೋಟಿ ರೂ. ಮೊತ್ತದ ಹಳೆಯ ತೆರಿಗೆ ವಿವಾದವನ್ನು ನೆದರ್ಲೆಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಗೆದ್ದುಕೊಂಡಿದೆ. ನೆದರ್ಲೆಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಲಯವು ಭಾರತವು ವೊಡಾಫೋನ್ ಮೇಲೆ ಹೇರಿರುವ ತೆರಿಗೆ ಭಾದ್ಯತೆಯ ಜತೆಗೆ ಬಡ್ಡಿ ಮತ್ತು ದಂಡವು ಭಾರತ ಹಾಗೂ ನೆದರ್ಲೆಂಡ್ ನಡುವಿನ ಹೂಡಿಕೆ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ವೊಡಾಫೋನ್ನಿಂದ ಬಾಕಿ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಭಾರತಕ್ಕೆ ಸೂಚಿಸಿರುವ ನ್ಯಾಯಮಂಡಳಿ, ವೊಡಾಫೋನ್ನ ಕಾನೂನು ಹೋರಾಟದ ವೆಚ್ಚವಾಗಿ 5.47 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ತೀರ್ಪು ನೀಡಿದೆ.