Job Description: ತಿರುವನಂತಪುರಂ: ಜಾಗತಿಕವಾಗಿ ವ್ಯಾಪಿಸಿದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಅಬ್ಬರದ ನಡುವೆಯೂ ಕೇರಳ ಸರ್ಕಾರವು ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ವಿಶ್ವಸಂಸ್ಥೆಯು ಪುರಸ್ಕಾರಕ್ಕೆ ಪಾತ್ರವಾಗಿದೆ. ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ಈ ವರ್ಷ ವಿಶ್ವಸಂಸ್ಥೆಯ ಇಂಟರ್ಯಾಜೆನ್ಸಿ ಟಾಸ್ಕ್ ಫೋರ್ಸ್ (ಯುಎನ್ಐಎಟಿಎಫ್) ಪ್ರಶಸ್ತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಘೋಷಿಸಿದ್ದು, 2019ರ ಸಾಲಿನ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿ ಸಾದಿಸಿದ ಕೇರಳ ರಾಜ್ಯಕ್ಕೆ ಪ್ರಶಸ್ತಿ ನೀಡಲಾಗಿದೆ.