Job Description: ಯಲಹಂಕ (ಬೆಂಗಳೂರು) : ಪ್ರತಿ ಸಲದಂತೆ ಈ ವರ್ಷವೂ ಕೂಡ ಬೆಂಗಳೂರಿನ ಯಲಹಂಕದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಝಷನ್ ಸೇರಿ ಹಲವು ಮುನ್ನೆಚರಿಗೆ ಕ್ರಮಗಳೊಂದಿಗೆ ದಿನಾಂಕ ನವೆಂಬರ್ 06 ರಿಂದ 08 ರ ವರೆಗೆ ಸರಳ ಕೃಷಿ ಮೇಳ ಆಯೋಜಿಸಲಾಗುವಾದುದೆಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಉಪಕುಲಪತಿಗಳಾದ ಡಾ. ರಾಜೆಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ. ಪ್ರತಿಸಲದಂತೆ ಈ ಬಾರಿಯೂ ಹಲವು ನೂತನ ಕೃಷಿ ತಂತ್ರಜ್ಞಾನ ಹಾಗೂ ಹೊಸ ತಳಿಗಳ ಬಿಡುಗಡೆ ಸೇರಿ ಪ್ರಗತಿಪರ ರೈತರಿಗೆ ರೈತ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗುವುದು.