Job Description: ನವದೆಹಲಿ: ಭಾರತವು ಫ್ರಾನ್ಸ್ ರಾಷ್ಟ್ರದಿಂದ ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಇವುಗಳನ್ನು ಸೇರ್ಪಡೆ ಮಾಡಲಾಗಿತ್ತು, ಇದೀಗ ಈ ರಾಫೆಲ್ ಯುದ್ಧವಿಮಾನವನ್ನು ಚಲಾಯಿಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡುವ ಕುರಿತ ಮಾಹಿತಿ ತಿಳಿದುಬಂದಿದೆ. ಮೂಲಗಳ ಪ್ರಕಾರ ರಾಫೆಲ್ ನ್ನು ಮುನ್ನಡೆಸಲು ಸುಮಾರು 10 ಮಹಿಳಾ ಪೈಲಟ್ ಗಳಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದ್ದು, ಅವರಲ್ಲಿ ಅರ್ಹರಾದವರನ್ನು ರಫೇಲ್ ಹಾರಿಸಲಿಸಲು ಆಯ್ಕೆ ಮಾಡಲಾಗುವದು. * ಸೆಪ್ಟೆಂಬರ್ 10ರಂದು ಮೊದಲ ಹಂತದ ರಫೇಲ್ ಯುದ್ಧವಿಮಾನಗಳು ಭಾರತದ ಸೇನೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ.