Job Description: ಉಡುಪಿ : ಭಾರತೀಯಯ ರೈಲ್ವೆ ಇಲಾಖೆಯ ಉಪ ವಿಭಾಗವಾದ ಕೊಂಕಣ ರೈಲ್ವೆ ಕಾರ್ಪೋರೇಷನ್ ನಿಂದ ನಿರ್ಮಿತ ಅತ್ಯಾಧುನಿಕ 1600 HP ಸಾಮರ್ಥ್ಯದ ಡೆಮು ಎರಡು ರೈಲುಗಳನ್ನು ನೇಪಾಳದ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಯಿತು. * ಈ ರೈಲುಗಳನ್ನು ಭಾರತ ಸರಕಾರದ 'ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ವರ್ಲ್ಡ್' ನೀತಿಯಡಿ ನಿರ್ಮಿಸಲಾಗಿದೆ. * ಕೊಂಕಣ ರೈಲ್ವೆ ಕಾರ್ಪೋರೇಷನ್ 2019 ಮೇ 10 ರಂದು ಅತ್ಯಾಧುನಿಕ 1600 ಎಚ್ ಡೆಮು ರೈಲುಗಳನ್ನು ನಿರ್ಮಿಸಿ ಕೊಡಲು ನೇಪಾಳದ ರೈಲ್ವೆ ಇಲಾಖೆ ಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. * ಈ ರೈಲುಗಳನ್ನು ಚೆನ್ನೈನ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿದೆ. * ಈ ಡೆಮು ರೈಲುಗಳು ಭಾರತದ ಜಯನಗರ ಹಾಗೂ ನೇಪಾಳದ ಕುರ್ಥಾ ಮಾರ್ಗದ ಮಧ್ಯ ಸಂಚರಿಸಲಿವೆ.