Job Description: ಬಾಗಲಕೊಟೆ: ಹಿರಿಯ ಸಾಹಿತಿ, ಹೆಸರಾಂತ ಕತೆಗಾರ ಪ್ರೊ.ಅಬ್ಬಾಸ್ ಮೇಲಿನಮನಿಯವರು ತಮ್ಮ 66 ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. 1954 ಮಾರ್ಚ್ 05 ರಂದು ಜನಿಸಿದ ಇವರು ಪದವಿಯವರೆಗೆ ಶಿಕ್ಷಣವನ್ನು ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದುಕೊಂಡು, ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. * ಇವರ ಪ್ರಮುಖ ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. * ಪ್ರಮುಖ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. * ಕಾದಂಬರಿಗಳು : ಜನ್ನತ್ ಮೊಹಲ್ಲ. * ಲೇಖನ: ಸೌಹಾರ್ದ ಸಂಸ್ಕೃತಿ. * ಸಂಪಾದಿತ ಕೃತಿ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಪ್ರಶಸ್ತಿ-ಪುರಸ್ಕಾರಗಳು: - ಮಂಗಳೂರಿನ ಮಹ್ಯುದ್ದೀನ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ - ಶಿವಮೊಗ್ಗ ಕ.ಸಾ.ಪ. ಲಂಕೇಶ್ ಕಥಾ ಪ್ರಶಸ್ತಿ - ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿ, ಡಾ. ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.