Job Description: ನವದೆಹಲಿ: ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಕೋವಿಡ್-19 ಪರೀಕ್ಷೆ ನಡೆಸಬಹುದಾದ ತಂತ್ರಜ್ಞಾನ ಸಂಶೋಧಿಸಲಾಗಿದ್ದು, ದೇಶಿಯವಾಗಿ ತಯಾರಿಸಲಾಗಿರುವ "ಫೆಲುಡಾ" ಕೊರೋನಾ-19 ಟೆಸ್ಟಿಂಗ್ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಮಾಡಲಿಯ ಅನುಮತಿ ಕೂಡ ದೊರಕಿದೆ. * ಫೆಲುಡಾ ಪರೀಕ್ಷೆ ಮೂಲಕ ಅತ್ಯಂತ ನಿಖರವಾಗಿ ಕೇವಲ 2 ಗಂಟೆಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ. * ಒಂದು ಕೋವಿಡ್ 19 ಪರೀಕ್ಷೆಗೆ ತಗಲುವ ಅಂದಾಜು ವೆಚ್ಚ ಕೇವಲ 600 ರೂಪಾಯಿ * ಗರ್ಭಧಾರಣೆಯನ್ನು ತ್ವರಿತವಾಗಿ ಪರೀಕ್ಷಿಸುವ ಮಾದರಿಯಲ್ಲಿ ಈ ಫೆಲುಡಾ ಪರೀಕ್ಷೆ ಕಾರ್ಯನಿರ್ವಹಿಸಲಿದ್ದು, ಕಾಗದದ ಪಟ್ಟಿ ಬಣ್ಣ ಬದಲಾಯಿಸುವ ಮೂಲಕ ಕೊರೋನಾ ಸೋಂಕನ್ನು ಖಚಿತಪಡಿಸಲಿದೆ . * ಭಾರತದಲ್ಲಿ ತಯಾರಿಸಲಾದ ಫೆಲುಡಾ ಜಾಗತಿಕ ಆರೋಗ್ಯ ಸೇವೆ ಹಾಗೂ ವಿಜ್ಞಾನ ಸಂಶೋಧನಾ ಜಗತ್ತಿಗೆ ಅತ್ಯದ್ಭುತ ಕೊಡುಗೆಯಾಗಿದೆ.