Job Description: ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧನೌಕೆಯಲ್ಲಿ ಕಾರ್ಯಾಚರಣೆ ಕರ್ತವ್ಯಕ್ಕೆ ಮಹಿಳೆಯರನ್ನು ನಿಯೋಜಿಸಲಾಗುತ್ತಿದೆ. ನೌಕಾಪಡೆಯಲ್ಲಿ ಹಲವು ವರ್ಷಗಳಿಂದ ಮಹಿಳಾ ಅಧಿಕಾರಿಗಳು ಸೇವೆಯಲ್ಲಿದ್ದರು ಕೂಡ ಯುದ್ಧನೌಕೆಗೆ ಮಹಿಳೆಯರನ್ನು ನಿಯೋಜಿಸಿರುವದು ಇದೆ ಮೊದಲು. * ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. * ಯುದ್ಧನೌಕೆಯಲ್ಲಿನ ಸೆನ್ಸಾರ್ ಗಳ ಬಳಕೆ ಸೇರಿದಂತೆ ಹಲವು ತರಬೇತಿ ಬಳಿಕ ಇವರಿಬ್ಬರೂ ನಿಯೋಜನೆಗೊಂಡಿದ್ದಾರೆ.