Job Description: ಬಳ್ಳಾರಿ : ಪ್ರಸ್ತುತ ಬಳ್ಳಾರಿ ಜಿಲ್ಲೆಯು ತುಂಬಾ ವಿಸ್ತಾರವಾಗಿದ್ದು, ಒಟ್ಟು 11 ತಾಲೂಕ ಕೇಂದ್ರಗಳನ್ನು ಹೊಂದಿದೆ, ಈ ಕಾರಣದಿಂದ ಜಿಲ್ಲೆಯ ವಿವಿಧ ತಾಲೂಕುಗಳ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ಸುಮಾರು 200 ಕಿ ಮೀ ಗಿಂತಲೂ ಹೆಚ್ಚು ದೂರವಿದ್ದು, ವಿಭಜನೆಗೊಂಡರೆ ಜಿಲ್ಲಾ ಕೇಂದ್ರ ತಲುಪುವುದು ತುಂಬಾ ಸುಲಭವಾಗಲಿದೆ. ಈ ಸಮಸ್ಯೆಯೆಯನ್ನು ಮನಗಂಡು ಜಿಲ್ಲೆಯ 11 ತಾಲೂಕುಗಳನ್ನು ವಿಭಾಗಿಸಿ, ನೂತನ ಜಿಲ್ಲೆ ವಿಜಯನಗರವನ್ನು ರಚಿಸುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಬಳ್ಳಾರಿ ಜಿಲ್ಲೆ ವಿಭಾಗ ಹೊಂದಿ, ಹೊಸಪೇಟೆ ಕೇಂದ್ರವಾಗಿಸಿ ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.