Job Description: ನವದೆಹಲಿ: ಇತ್ತೀಚಿಗೆ ರಾಜ್ಯಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ಮಸೂದೆ 2020 ಅನ್ನು ಅಂಗೀಕರಿಸಿಲಾಯಿತು. ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರವರು ವೈದ್ಯಕೀಯ ಸಿಬ್ಬಂದಿಗಳ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸಲು ಈ ಮಸೂದೆಯು ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು. ಕೋವಿಡ್-19 ವಿರುದ್ಧ ಸಮರ ಸಾರುತ್ತಿರುವ ವೈದ್ಯರು, ಅರೆವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅನೇಕರನ್ನು ಅವಮಾನಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಕಾನೂನಿನ ಅವಶ್ಯಕತೆ ಸಲುವಾಗಿ ಈ "ಸಾಂಕ್ರಾಮಿಕ ರೋಗಗಳ ಮಸೂದೆ"ಗೆ ತಿದ್ದುಪಡಿ ಮಾಡಿರುವದಾಗಿ ಸಚಿವ ಹರ್ಷವರ್ಧನ್ ತಿಳಿಸಿದರು.