Job Description: ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಶಿಕ್ಷಣಕ್ಕೆ ನೀಡಿರುವ ಕೋಡುಗೆಯನ್ನು ಪರಿಗಣಿಸಿ 2020 ರ "ಇಗ್ ನೊಬೆಲ್ ಪ್ರಶಸ್ತಿ" ಯನ್ನು ಇವರಿಗೆ ಘೋಷಿಸಲಾಗಿದೆ. ದೇಶದಲ್ಲಿ ವ್ಯಾಪಿಸಿದ ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಜನತೆಗೆ ಅರಿವು ಮೂಡಿಸಲು ಪ್ರಮುಖ ಪಾತ್ರ ವಹಿಸಿದ ಕಾರಣ ಇಂಪ್ರಾಬಬಲ್ ರೀಸರ್ಚ್ ನಿಯತಕಾಲಿಕೆ "ಇಗ್ ನೊಬೆಲ್" ಪ್ರಶಸ್ತಿ ನೀಡಿ ಗೌರವಿಸಿದೆ. ಇಂಪ್ರಾಬಬಲ್ ರೀಸರ್ಚ್ ನಿಯತಕಾಲಿಕೆಯು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬ್ರೆಜಿಲ್, ಬ್ರಿಟನ್, ಅಮೆರಿಕ, ಟರ್ಕಿ, ರಷ್ಯಾ ಮೆಕ್ಸಿಕೊ, ಬೆಲಾರಸ್ ಮತ್ತು ತುರ್ಕಮೆನಿಸ್ತಾನ್ ಸರ್ಕಾರಗಳ ಪ್ರಮುಖರಿಗೂ ಈ ಪ್ರಶಸ್ತಿ ನೀಡಿ ಗೌರವಿಸಿದೆ.