Job Description: ನವದೆಹಲಿ : ಸೆಪ್ಟೆಂಬರ್ 18 ರಂದು ಅಂತರರಾಷ್ಟ್ರೀಯ ಕಡಲ ಸ್ವಚ್ಛತಾ ಅಭಿಯಾನದ ದಿನವಾದುದರಿಂದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮೊದಲ ಬಾರಿಗೆ ಭಾರತದ ಎಂಟು ಕಡಲ ತೀರಗಳನ್ನು "ಬ್ಲೂ ಫ್ಲ್ಯಾಗ್" ಅಂತರರಾಷ್ಟ್ರೀಯ ಮಾನ್ಯತೆಗೆ ಶಿಫಾರಸ್ಸು ಮಾಡಿರುವುದಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಾನ್ಯತೆಗೆ ಶಿಫಾರಸ್ಸುಗೊಂಡ ಬೀಚ್ ಗಳು : ಗುಜರಾತ್ ನ ಶಿವರಾಜಪುರ, ದಿಯು ಮತ್ತು ದಮನ್ ನ ಘೋಗ್ಲಾ, ಕೇರಳದ ಕಪ್ಪದ್, ಕರ್ನಾಟಕದ ಪಡುಬಿದ್ರಿ ಮತ್ತು ಹೊನ್ನಾವರದ ಇಕೋ ಬೀಚ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ನ ರಾಧಾನಗರ್ ಬೀಚ್ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಷನ್ : ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಬೀಚ್ ಗಳನ್ನು ವಿಶ್ವದ ಅತಿ ಸ್ವಚ್ಛ ಕಡಲ ತೀರಗಳೆಂದು ಪರಿಗಣಿಸಲಾಗುವದು, ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ನಾಲ್ಕು ಭಾಗಗಳ 33 ಮಾನದಂಡಗಳನ್ನಿಟ್ಟುಕೊಂಡು ಪ್ರಮಾಣೀಕರಿಸಲಾಗುವದು.