Job Description: ಚೆನ್ನೈ : ದಕ್ಷಿಣ ಕೊರಿಯಾದ ಸಮಾಜ ಕಲ್ಯಾಣ ಸಂಸ್ಥೆಯಾದ ಆಂಗುಕ್ ಝೆನ್ ಸೆಂಟರ್ ಸಂಸ್ಥೆಯು ಭಾರತ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಸ್ನೇಹದ ಪ್ರತೀಕವಾಗಿ ಹಾಗೂ ಕೋರೋಣ ನಿಯಂತ್ರಣಕ್ಕಾಗಿ ಮಾನವೀಯ ದೃಷ್ಟಿಯಿಂದ ಭಾರತಕ್ಕೆ ನೆರವಾಗಲು ಸುಮಾರು ಒಂದು ಲಕ್ಷದಷ್ಟು ಮಾಸ್ಕಗಳನ್ನು ಉಚಿತ ವಿತರಣೆಗಾಗಿ ಕೊಡುಗೆ ನೀಡಿದೆ. ಧರ್ಮಗುರು ಸುಬುಲ್ ಸುಮಿನ್ ನೇತೃತ್ವದ ಸಮಾಜ ಕಲ್ಯಾಣ ಸಂಸ್ಥೆಯಾದ ಆಂಗುಕ್ ಝೆನ್ ಸೆಂಟರ್ ಮೂಲಕ ಈ ನೆರವು ಬೂಸಾನ್ನಿಂದ ಚೆನ್ನೈಗೆ ಹಸ್ತಾಂತರಿಸಲಾಗಿದೆ.