Job Description: ವಿಶ್ವಸಂಸ್ಥೆ: ಕೊರೊನಾ ಸೋಂಕಿನ ಭೀತಿಯ ನಡುವೆಯೂ ಐತಿಹಾಸಿಕ 75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನ ಆರಂಭಗೊಂಡಿದೆ. ಪ್ರತಿ ಬಾರಿ ಅಧಿವೇಶನಕ್ಕೆ ಹಲವು ರಾಷ್ಟ್ರಗಳ ನಾಯಕರುಗಳು ಹಾಗೂ ಅಧಿಕಾರಿಗಳು ಸಾಕ್ಷಿಯಾಗುತ್ತಿದ್ದರು, ಆದರೆ ಈ ಬಾರಿ ಕೋರೋಣ ಸೋಂಕು ಹರಡುವ ಸಾಧ್ಯತೆ ಹಿನ್ನಲೆ, ವಿಶ್ವಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ನಾಯಕರು ವರ್ಚುವಲ್ ಆಗಿ ಈ ಅಧಿವೇಶನದಲ್ಲಿ ಬಾಗಿಯಾಗುತ್ತಿದ್ದಾರೆ. * 75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ಟರ್ಕಿಷ್ ರಾಯಭಾರಿ ವೋಲ್ಕಾನ್ ಬೋಝ್ಕಿರ್ ಅವರು ವಹಿಸಿಕೊಂಡಿದ್ದಾರೆ. * ಕಳೆದ ಬಾರಿ ನಡೆದ ಅಧಿವೇಶನದ ಅಧ್ಯಕ್ಷತೆಯನ್ನು ಜೈಜೀರಿಯಾದ ತಿಜ್ಜಾನಿ ಮೊಹಮ್ಮದ್ ಬಂಡೆ ಅವರು ವಹಿಸಿಕೊಂಡಿದ್ದರು. * ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ನೆನಪಿನ ಸಾಮಾನ್ಯ ಸಭೆ ಸೆಪ್ಟೆಂಬರ್ 21 ರಂದು ನಡೆಯಲಿದೆ. * ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26 ರಂದು ವಿಡಿಯೊ ರೆಕಾರ್ಡ್ ಮೂಲಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.