Job Description: ಧಾರವಾಡ : ಮಾನವನ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ಅವಿಭಾಜ್ಯ ಅಂಗವಾಗಿದೆ ಅದರ ಇದರ ತಾಜ್ಯ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗಾಗಿ ವಿಶ್ವದಾದ್ಯಂತ ಹಲವು ಸಂಶೋದನೆಗಳು ನಡೆಯುತ್ತಿರುವ ಬೆನ್ನಲ್ಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಶೀತಲ್ ಕಸ್ತಿಯವರು ಪ್ಲಾಸ್ಟಿಕ್ ತಿನ್ನುವ ಹುಳವನ್ನು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿ ಶೀತಲ್ ಕಸ್ತಿ ಮಾರ್ಗದರ್ಶಕರಾದ ಡಾ.ಸಿ.ಟಿ ಶಿವಶರಣ ಅವರ ಮಾರ್ಗದರ್ಶನದಲ್ಲಿ ಈ ಹುಳುವನ್ನು ಪತ್ತೆಹಚ್ಚಿದ್ದು, ಗೋಧಿ, ಜೋಳದ ಚೀಲದಲ್ಲಿ ಕಂಡುಬರುವ ಬಾಲಹುಳು ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ತಿಂದಿರುವದನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಈ ಹುಳುಗಳ ಮಲವು ನಿಸರ್ಗದಲ್ಲಿ ಕರಗಬಲ್ಲ ಅಂಶಗಳನ್ನು ಹೊಂದಿದೆ.