Job Description: ನವದೆಹಲಿ: ಭಾರತದ ಖ್ಯಾತ ಇತಿಹಾಸ ತಜ್ಞೆಯಾದ ಕಪಿಲಾ ವಾತ್ಸಾಯನ ಅವರು ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಇವರು ಇತಿಹಾಸ, ಕಲೆ, ವಾಸ್ತುಶಿಲ್ಪ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸಿದ್ಧ ವಿದ್ವಾಂಸರಾಗಿದ್ದರು. ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ಟ್ರಸ್ಟ್ ನಲ್ಲಿ ಕಪಿಲಾ ವಾತ್ಸಾಯನ್ ಆಜೀವ ಪರ್ಯಂತ ಸದಸ್ಯತ್ವ ಹೊಂದಿದ್ದರು.ಅಲ್ಲದೆ ಐಐಸಿಯ ಏಷ್ಯಾ ಪ್ರಾಜೆಕ್ಟ್ ನಲ್ಲೂ ಸದಸ್ಯರಾಗಿದ್ದರು. 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸ್ಥಾಪಕ ನಿರ್ದೇಶಕಿ ಕೂಡ ಆಗಿದ್ದರು. ಇವರು 'ದ ಸ್ವೈರ್ ಅಂಡ್ ದ ಸರ್ಕಲ್ ಆಫ್ ಇಂಡಿಯನ್ ಆರ್ಟ್ಸ್' ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ.