Job Description: ಬೆಂಗಳೂರು : ಭಾರತ ರತ್ನ ಹಾಗೂ ವಿಶ್ವವಿಖ್ಯಾತ ಎಂಜಿನಿಯರ್ ಆಗಿರುವ ಕರ್ನಾಟಕದ ಹೆಮ್ಮೆ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನದ ಅಂಗವಾಗಿ ಹಾಗೂ ದೇಶ ಕಟ್ಟುವ ಎಂಜಿನಿಯರ್ ವೃತ್ತಿಗೆ ಗೌರವ ಸೂಚಿಸಲು ಭಾರತದಾದ್ಯಂತ ಸೆಪ್ಟೆಂಬರ್ 15 ರಂದು "ಎಂಜಿನಿಯರ್ಸ್ ಡೇ" ಆಚರಿಸಲಾಗುತ್ತದೆ. ಈ ಮೂಲಕ ಜಾಗತಿಕ ಮಟ್ಟದಲ್ಲೇ ತಮ್ಮ ತಾಂತ್ರಿಕ ಕೌಶಲ್ಯದ ಮೂಲಕ ಹೆಸರಾದ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.