Job Description: ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಎಕನಾಮಿಕ್ ಆಯಂಡ್ ಸೋಷಿಯಲ್ ಕೌನ್ಸಿಲ್ (ECOSOC)ನ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ (CSW) ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಭಾರತ, ಚೀನಾ ಮತ್ತು ಅಫ್ಘಾನಿಸ್ತಾನ ಈ ಮೂರು ರಾಷ್ಟ್ರಗಳು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದವು, ಆಫ್ಘನ್ ಮತ್ತು ಭಾರತ ಗೆಲುವು ದಾಖಲಿಸಿ ಸದಸ್ಯ ಸ್ಥಾನ ಪಡೆದವು. * ಈ ಗೆಲುವಿನ ಮೂಲಕ ಭಾರತವು CSWನ ಸದಸ್ಯ ರಾಷ್ಟ್ರವಾಗಿ 2021ರಿಂದ 2025ರ ವರೆಗೆ ಕಾರ್ಯನಿರ್ವಹಿಸಲಿದೆ. * ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ (CSW) : - ಇದು ಒಂದು ಜಾಗತಿಕ ಮಟ್ಟದ ಅಂತರ್ಸರ್ಕಾರೀಯ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಪ್ರಮುಖವಾಗಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತದೆ. - ಈ ಸಂಸ್ಥೆಯನ್ನು 1946ರ ಜೂನ್ 21ರಂದು ತೆಗೆದುಕೊಂಡ ನಿರ್ಣಯದ ಅನುಸಾರ ಆರಂಭಿಸಲಾಗಿದ್ದು, ವಿಶ್ವಸಂಸ್ಥೆಯ ECOSOCದ 45 ಸದಸ್ಯ ರಾಷ್ಟ್ರಗಳ ತಲಾ ಒಬ್ಬ ಪ್ರತಿನಿಧಿ ಸದಸ್ಯರಾಗಿರುತ್ತಾರೆ.