Job Description: ಲಖನೌ : ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ 'ಮೊಘಲ್ ಮ್ಯೂಸಿಯಂ'ಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ಇಡಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಸರಕಾರ ತೀರ್ಮಾನಿಸಿದೆ. ಮೊಗಲರು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದು ಅವರು ನಮ್ಮ ಹಿರೋಗಳಾಗಲು ಸಾಧ್ಯವಿಲ್ಲ ಅಂತೆಯೇ ಮರಾಠ ಸಾಮ್ರಾಟ ಶಿವಾಜಿಯವರ ಹೆಸರು ನಮ್ಮಲ್ಲಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಭಾವನೆಯನ್ನು ಮೂಡಿಸುತ್ತದೆ ಹೀಗಾಗಿ ಮ್ಯೂಸಿಯಂಗೆ ಮೊಗಲ್ ಬದಲು ಶಿವಾಜಿ ಹೆಸರು ಇರಿಸಲು ನಿರ್ಧರಿಸಲಾಗಿದೆ ಎಂದು ಯೋಗಿ ತಿಳಿಸಿದ್ದಾರೆ.