Job Description: ನವದಹೆಲಿ : ದೇಶದ ಮಹಾರಾಷ್ಟ್ರದ ನಾಶಿಕ್ ಹಾಗೂ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಈರುಳ್ಳಿ ಉತ್ಪಾದನೆ ಕುಂಠಿತಗೊಂಡಿದ್ದು, ಇದೆ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಕಂಡುಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಫ್ತಿನ ಮೇಲೆ ನಿಷೇಧ ಹೇರಿದೆ. ಗುಲಾಬಿ ಈರುಳ್ಳಿ, ಆಂಧ್ರದ ಕೃಷ್ಣಾಪುರಂ ಈರುಳ್ಳಿ ಸೇರಿದಂತೆ ದೇಶದಲ್ಲಿ ಬೆಳೆಯುವ ಎಲ್ಲ ತಳಿಯ ಈರುಳ್ಳಿ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.