Job Description: ತಿರುವನಂತಪುರ: ಕೇರಳ ರಾಜ್ಯ ಸರಕಾರದ ಆರೋಗ್ಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿರುವ ಶೈಲಜಾ ಅವರಿಗೆ ಬ್ರಿಟನ್ ದೇಶದ " ಪ್ರಾಸ್ಪೆಕ್ಟ್" ನಿಯತಕಾಲಿಯು "ವಿಶ್ವದ ಶ್ರೇಷ್ಠ ಚಿಂತಕಿ" ಎಂಬ ಗೌರವ ನೀಡಿದೆ. ಕೇರಳ ಸರ್ಕಾರದ ಆರೋಗ್ಯ ಸಚಿವೆಯಾಗಿರುವ ಇವರು ಕೋರೋಣ ವೈರಸ್ ಅನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗಮನಸೆಳೆದ ಕಾರಣ ಈ ಗೌರವಕ್ಕೆ ಭಾಜನರಾಗಿದ್ದಾರೆ. ಇನ್ನೂ ಕೋರೋಣ ವೈರಸ್ ನಿಯಂತ್ರಿಸಲು ಯಶಸ್ವಿಯಾಗಿರುವ ನ್ಯೂಜಿಲೆಂಡ್ ಪ್ರಧಾನಿ ಜೇಸಿಂಡಾ ಆರ್ಡರ್ನ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು ಇಪ್ಪತ್ತು ಸಾವಿರ ಜನರ ಮತದಾನದ ವರದಿಯನ್ನು ಆಧರಿಸಿ ಶೈಲಜಾ ಅವರಿಗೆ ಈ ಗೌರವವನ್ನು ನೀಡಲಾಗಿರುವುದು ವಿಶೇಷವಾಗಿದೆ.