Job Description: ನವದೆಹಲಿ: ಕರ್ನಾಟಕದ ಜೀವನದಿಯಾಗಿರುವ ಕೃಷ್ಣಾ ಮತ್ತು ಕಾವೇರಿ ನದಿಗಳನೊಳಗೊಂಡು ದೇಶದ ವಿವಿಧ ಒಟ್ಟು ಹದಿಮೂರು ನದಿಗಳ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕೊಯಂಬತ್ತೂರಿಗೆ ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಅವರ "ಕಾವೇರಿ ಕೂಗು" ನದಿ ಅಭಿಯಾನದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈಗಾಗಲೇ ಗಂಗಾ ನದಿಯಲ್ಲಿ ಪುನರುಜ್ಜೀವನ ಕಾರ್ಯವನ್ನು ಜಾರಿಗೆ ತರಲಾಗಿದ್ದು, ಅದೇ ರೀತಿಯಾಗಿ ದೇಶದ ಕೃಷ್ಣಾ, ಕಾವೇರಿ, ಬಿಯಾಸ್, ಚಿನಾಬ್, ಸಟ್ಲೆಜ್, ರಾವಿ, ಯಮುನಾ, ನರ್ಮದಾ, ಮಹಾನದಿ ಸೇರಿ ವಿವಿಧ ಹದಿಮೂರು ನದಿಗಳ ಪುನರಿಜ್ಜೀವನಗೊಳಿಸುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ