Job Description: ರಮ್ಮಿ, ಪೋಕರ್ ಜೂಜಾಟದ ಆನ್ಲೈನ್ ಗೇಮ್ಗಳು ಯುವ ಜನತೆಯನ್ನು ತಪ್ಪು ದಾರಿಗೆ ತಳ್ಳುತ್ತಿರುವ ಕಾರಣ ಈ ಜೂಜಾಟದ ಗೇಮ್ಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನವನ್ನು ಆಂಧ್ರ ಪ್ರದೇಶ ಸರ್ಕಾರ ತೆಗೆದುಕೊಂಡಿದೆ. AP ಗೇಮಿಂಗ್ ಕಾಯಿದೆ 1974 ನ್ನು ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು, ಆನ್ಲೈನ್ ಜೂಜಾಟ ಗೇಮ್ಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಆದ್ದರಿಂದ ನಾವು ಯುವಕರನ್ನು ರಕ್ಷಿಸಲು ಅಂತಹ ಎಲ್ಲಾ ಆನ್ಲೈನ್ ಜೂಜಾಟ ಗೇಮ್ಗಳು ನಿಷೇಧಿಸಲು ನಿರ್ಧರಿಸಿದ್ದೇವೆ ರಾಜ್ಯ ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.