Job Description: ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ "ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್". ಇದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿದೆ. ಇಲ್ಲಿ ಪ್ರತಿ ಬಾರಿ ಇಲ್ಲಿ ಬಣ್ಣ ಬಣ್ಣದ ಟುಲಿಪ್ ಗಳು ಅರಳಿ ನಿಂತು ಲಕ್ಷ ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತವೆ. * ಈ ಉದ್ಯಾನವು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಬ್ ನಬಿ ಆಜಾದ್ ಅವರ ಕನಸಾಗಿತ್ತು. * 2007ರಲ್ಲಿ ಕಾರ್ಯಾರಂಭ ಮಾಡಿದ ಇದು ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದಾಲ್ ಸರೋವರ ತೀರದ 80 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ.