Job Description: ನವದೆಹಲಿ : ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು ಸುಮಾರು 2580 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಪಿನಾಕಾ ರಾಕೆಟ್ ಲಾಂಚರ್ಗಳನ್ನು ಖರೀದಿಸಲಿದೆ. ಈ ಒಪ್ಪಂದದ ಮೂಲಕ ಆರು ಸೇನಾ ರೆಜಿಮೆಂಟ್ಗಳಿಗೆ ಒಟ್ಟು 114 ಪಿನಾಕಾ ರಾಕೆಟ್ ಲಾಂಚರ್ಗಳು ಖರೀದಿಸಲಾಗುವದು. ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಗಳನ್ನೂ DRDO ವಿನ್ಯಾಸಗೊಳಿಸಿದ್ದು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗುವದು. 2024 ರೊಳಗಾಗಿ ಸಂಪೂರ್ಣ ತಯಾರಿಗೊಂಡು, ಸೇನೆಯ ಸೇವೆಗೆ ಲಭ್ಯವಾಗಿಸಲು ಯೋಜಿಸಲಾಗಿದೆ. ಈ ಯೋಜನೆಯ ಪ್ರಸ್ತಾವನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿಗೆ ಅನುಮೋದನೆ ನೀಡಿದ್ದಾರೆ.