Job Description: ಬೆರೂತ್ : ಲೆಬನಾನ್ನಲ್ಲಿ ಇತ್ತೀಚಿಗೆ ನಡೆದ ಭೀಕರ ಸ್ಟೋಟದ ಹೊಣೆಹೊತ್ತು ಅಲ್ಲಿನ ಸರ್ಕಾರವನ್ನು ವಿಸರ್ಜಿಸಲಾಗಿತ್ತು. ಪ್ರಸ್ತುತ ಜರ್ಮನಿಯಲ್ಲಿ ಲೆಬನಾನ್ ರಾಷ್ಟ್ರದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಸ್ತಫಾ ಆದಿಬ್ ಅವರು ಪ್ರಮುಖ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಒಟ್ಟು 128 ಸದಸ್ಯ ಬಲ ಹೊಂದಿರುವ ಲೆಬಬಾನ್ ಸಂಸತ್ನಲ್ಲಿ ಮುಸ್ತಫಾ ಆದಿಬ್ ಅವರಿಗೆ 90 ಮತಗಳು ಬೆಂಬಲ ದೊರೆತಿದ್ದು, ಇವರಿಗೆ ಶೀಘ್ರ ಸರ್ಕಾರ ರಚನೆ ಮಾಡುವಂತೆ ಲೆಬನಾನ್ ಅಧ್ಯಕ್ಷ ಮಿಶೆಲ್ ಅವೂನ್ ಸೂಚಿಸಿರುವದಾಗಿ ತಿಳಿದು ಬಂದಿದೆ.