Job Description: ನವದೆಹಲಿ: ಭಾರತ ಮತ್ತು ರಷ್ಯಾ ರಾಷ್ಟ್ರದ ನಡುವೆ ಇತ್ತೀಚೆಗೆ ಎಕೆ-47 203 ಬಂದೂಕುಗಳ ತಯಾರಿಕೆ ಕುರಿತು ಒಪ್ಪಂದ ಏರ್ಪಟ್ಟಿದ್ದು, ಈ ಒಪ್ಪಂದದ ಪ್ರಕಾರ ಭಾರತೀಯ ಸೇನೆಗೆ ಅವಶ್ಯಕತೆಯಿರುವ ಒಟ್ಟು 7.70 ಲಕ್ಷ ಎಕೆ-47 203 ಬಂದೂಕುಗಳ ಪೈಕಿ 1 ಲಕ್ಷ ಎಕೆ-47 203 ಬಂದೂಕುಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ಮತ್ತು ಇನ್ನು ಉಳಿದ ಎಕೆ-47 203 ಭಾರತದಲ್ಲಿ ತಯಾರಿಸಲಾಗುವುದು ಈ ಯೋಜನೆಯ ಉದ್ದೇಶವಾಗಿದೆ. * ಭಾರತ ಹಾಗೂ ರಷ್ಯಾದ ರಾಷ್ಟ್ರಗಳು ಜಂಟಿಯಾಗಿ ಸ್ಥಾಪಿಸಿದ "ಇಂಡೋ ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್" ನ ಭಾಗವಾಗಿ ಭಾರತದಲ್ಲಿ ಈ ಬಂದೂಕುಗಳನ್ನು ತಯಾರಿಸಲಾಗುವುದು.