Job Description: ಇತ್ತೀಚಿಗೆ ತಮಿಳುನಾಡು ಸರ್ಕಾರವು 108 ತುರ್ತು ಸೇವೆಗಳನ್ನು ಮತ್ತಷ್ಟು ಬಲಪಡಿಸಲು 90 ಆಂಬುಲೆನ್ಸ್ ಮತ್ತು ಜೀವ ಉಳಿಸಲು ಸಹಾಯವಾಗುವ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಇತರ ವಾಹನಗಳನ್ನು ರಾಜ್ಯದ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಚಾಲನೆ ನೀಡಿದ್ದು, ಇದೆ ವೇಳೆ ಈ ವಾಹನಗಳಿಗೆ ಚಾಲಕರಾಗಿ ನೇಮಕಗೊಂಡ ಚಾಲಕರುಗಳಿಗೆ ಆದೇಶ ಪ್ರತಿಗಳನ್ನು ಹಸ್ತಾಂತರಿಸಿದರು. ಹೊಸದಾಗಿ ನೇಮಕಗೊಂಡವರಲ್ಲಿ ಎಂ. ವೀರಲಕ್ಷ್ಮಿ ಕೂಡ ಸೇರಿ ಸೇರುವ ಮೂಲಕ ದೇಶದ ಮೊಟ್ಟ ಮೊದಲ ಮಹಿಳಾ ಆಂಬುಲೆನ್ಸ್ ಚಾಲಕಿ ಎನ್ನಿಸುವ ಸಾಧನೆ ಮಾಡಿದರು.