Job Description: ದೆಹಲಿ: ಗ್ರೂಪ್ ಸಿ ಮಟ್ಟದ ಸರ್ಕಾರಿ ಹುದ್ದೆಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಗೆ ಅವಕಾಶ ನೀಡಲಾಗುತ್ತಿದ್ದು, ಈ ಸಾಲಿಗೆ ಇದೀಗ ಮಲ್ಲಕಂಬ, ಹಗ್ಗ ಜಗ್ಗಾಟ, ಪ್ಯಾರಾ-ಕ್ರೀಡೆ ಸೇರಿ ಒಟ್ಟು 20 ಕ್ರೀಡೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲು ಕ್ರೀಡಾ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮತಿ ನೀಡಿದೆ. ಈ ಮೂಲಕ ಕ್ರೀಡಾ ಕೋಟಾದ ನೇರ ನೇಮಕಾತಿ ಅಡಿಯಲ್ಲಿ ಇದ್ದ ಒಟ್ಟು ಕ್ರೀಡೆಗಳ ಪಟ್ಟಿ 63ಕ್ಕೆ ಏರಿಸಲಾಗಿದೆ. * ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸುವ ಯಾವುದೇ ಕ್ರೀಡಾಪಟುವು ಗ್ರೂಪ್ ಸಿ ಹುದ್ದೆಗೆ ನೇರ ನೇಮಕಾತಿ ಹೊಂದಲು ಅರ್ಹತೆ ಹೊಂದಿರುತ್ತಾನೆ.