Job Description: ಆಂಧ್ರಪ್ರದೇಶ : ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಅಂದ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಯವರು ಇತ್ತೀಚಿಗೆ "ವೈಎಸ್ಆರ್ ಚೆಯುಥಾ" ಎಂಬ ಮತ್ತೊಂದು ನೂತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ. YSR ಚೆಯುಥಾ ಯೋಜನೆ : ಈ ಯೋಜನೆಯಡಿಯಲ್ಲಿ SC, ST, OBC ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 45-60 ವರ್ಷದೊಳಗಿನ ಸುಮಾರು 23 ಲಕ್ಷ ಮಹಿಳೆಯರಿಗೆ ವಾರ್ಷಿಕ 18,750ರೂ.ಗಳಂತೆ ನಾಲ್ಕು ವರ್ಷಗಳಲ್ಲಿ ಒಟ್ಟು 75,000 ರೂ.ಗಳನ್ನು ವಿತರಿಸಲಾಗುವದು. * ಪಿಂಚಣಿಗೆ ಅರ್ಹರಾದ ವಿಧವೆ/ಒಂಟಿ ಮಹಿಳೆಯರು ಈಗಾಗಲೇ ಪ್ರತಿ ತಿಂಗಳಿಗೆ 2,250 ರೂ.ನಂತೆ ವಾರ್ಷಿಕ 27,000 ರೂ.ಗಳನ್ನು ಪಡೆಯುತ್ತಿದ್ದು, ಇನ್ನು ಈ ನೂತನ ಯೋಜನೆಯಡಿ ವಾರ್ಷಿಕ 18,750 ರೂಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. * ಚೇಯುಥಾ ಯೋಜನೆಯಡಿ ಫಲಾನುಭವಿಗಳಿಗೆ ಮಾರ್ಕೆಟಿಂಗ್ ಮತ್ತು ತಾಂತ್ರಿಕ ನೆರವನ್ನೂ ಸರ್ಕಾರದಿಂದ ನೀಡಲಾಗುವದು.