Job Description: ಇತ್ತೀಚೆಗೆ ಸೇನೆಯ ಎಲ್ಲ ವಿಭಾಗಗಲ್ಲಿಯು ಮಹಿಳಾ ಅಧಿಕ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಶ್ರೀನಗರ ವಲಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪಡೆ ಮಹಾ ನಿರ್ದೇಶಕರಾಗಿ ಮಹಿಳಾ ಐಪಿಎಸ್ ಅಧಿಕಾರಿಯಾದ ಚಾರು ಸಿನ್ಹಾ ಅವರನ್ನು ನೇಮಕ ಮಾಡಿದೆ. 1996 ರ ಬ್ಯಾಚ್ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರನ್ನು ಈಗ ಶ್ರೀನಗರ ವಲಯದ ಸಿಆರ್ಪಿಎಫ್ ಇನ್ಸ್ಪೆಕ್ಟರ್ ಜನರಲ್ ಆಗಿ ನೇಮಕವಾಗಿದ್ದಾರೆ. ಚಾರು ಸಿನ್ಹಾ ಅವರು ಕರ್ತವ್ಯ ನಿರ್ವಹಿಸಬೇಕಾದ ಸಿಆರ್ಪಿಎಫ್ ತುಕಡಿಯಲ್ಲಿ 2 ಶ್ರೇಣಿ, 22 ಕಾರ್ಯನಿರ್ವಾಹಕ ಘಟಕ ಹಾಗೂ 3 ಮಹಿಳಾ ವಿಭಾಗಗಳಿರುತ್ತವೆ. ಅಲ್ಲದೆ ಶ್ರೀನಗರದ ಸಮೂಹ ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು ಇದು ಹೊಂದಿರುತ್ತವೆ.