Job Description: ಬೆಂಗಳೂರು: ದೇಶದಲ್ಲಿ ವ್ಯಾಪಿಸಿರುವ ಕೋರೋಣ ಸೋಂಕಿನ ಕಾರಣದಿಂದಾಗಿ ಭಾರತ ಸರ್ಕಾರದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಯುವ ವಿಜ್ಞಾನಿಗಳು (ಯುವಿಕ-2020) ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದೆ. ಪ್ರತಿ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ಯುಆರ್ ರಾವ್ ಬಾಹ್ಯಾಕಾಶ ಕೇಂದ್ರ (ಬೆಂಗಳೂರು) ಅಹ್ಮದಾಬಾದ್ ನಲ್ಲಿರುವ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್, ಈಶಾನ್ಯ ಬಾಹ್ಯಾಕಾಶ ಕೇಂದ್ರ (ಶಿಲ್ಲಾಂಗ್) ಗಳಿಗೆ ಕರೆದೊಯ್ದು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಾಗುತ್ತಿತ್ತು. ಈಗಾಗಲೇ ಈ ಯೋಜನೆಗಾಗಿ 368 ಅರ್ಹ ವಿದ್ಯಾರ್ಥಿಗಳ ಪೈಕಿ 113 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತಾದರೂ, ಕೊರೋನಾ ಹಿನ್ನೆಲೆಯಲ್ಲಿ ಯೋಜನೆಯನ್ನು ರದ್ದುಗೊಳಿಸಲಾಗಿದೆ.