Job Description: ನವದೆಹಲಿ: ಬರುವ ಸೆಪ್ಟೆಂಬರ್ 10 ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಿದ 5 ರಫೇಲ್ ಯುದ್ಧ ವಿಮಾನಗಳನ್ನು ಸೇನೆಗೆ ಅಧಿಕೃತವಾಗಿ ನಿಯೋಜನೆ ಮಾಡಲಿದ್ದಾರೆ ಎಂದು ಎಎನ್ಐ ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮವನ್ನು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಡೆಸಲಿದ್ದು, ಕಾರ್ಯಕ್ರಮಕ್ಕೆ ಫ್ರಾನ್ಸ್ ರಕ್ಷಣಾ ಸಚಿವರಿಗೂ ಆಹ್ವಾನ ನೀಡಲಾಗಿದೆ. ಒಟ್ಟು 36 ರಫೇಲ್ ವಿಮಾನಗಳನ್ನು ಭಾರತ ಖರೀದಿಸಿದ್ದು, ಈ ಪೈಕಿ 30 ವಿಮಾನಗಳು ಯುದ್ಧಕ್ಕಾಗಿಯೂ ಹಾಗೂ ಉಳಿದ 6 ವಿಮಾನಗಳು ತರಬೇತಿಗಾಗಿಯೂ ಬಳಕೆಯಾಗಲಿವೆ. 2016ರಲ್ಲಿ ಒಪ್ಪಂದ: NDA ಸರ್ಕಾರವು ಫ್ರಾನ್ಸ್ನ ವಾಯುಯಾನ ಸಂಸ್ಥೆ ಡಾಸೊ ಏವಿಯೇಷನ್ನಿಂದ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ₹59,000 ಕೋಟಿ ಮೊತ್ತದ ಒಪ್ಪಂದಕ್ಕೆ 2016ರ ಸೆಪ್ಟೆಂಬರ್ 23ರಂದು ಸಹಿ ಹಾಕಿತ್ತು.