Job Description: ಭಾರತೀಯ ನೌಕಾಪಡೆಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆಸಲ್ಲಿಸಿದ ಐಎನ್ಎಸ್ ವಿರಾಟ ಎಂಬ ವಿಮಾನವಾಹಕ ನೌಕೆಯನ್ನು ಗುಜರಾತ್ನ ಅಲಾಂಗ್ನಲ್ಲಿ ನಿಷ್ಕ್ರಿಯ ಗೊಳಿಸಲು ತೀರ್ಮಾನಿಸಲಾಗಿದೆ. ಈ ನೌಕೆಯನ್ನು ಮೂರು ವರ್ಷಗಳ ಹಿಂದೆ ಸೇವೆಯಿಂದ ರದ್ದುಗೊಳಿಸಲಾಗಿತ್ತು. * INS Virat ಭಾರತೀಯ ನೌಕಾಪಡೆಯ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಡಗು. * 1987 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆ. * ಈ ನೌಕೆಯನ್ನು ಮೆಟಲ್ ಸ್ಕ್ರ್ಯಾಪ್ ಕಂಪನಿಯು 38.54 ಕೋಟಿ ರೂ.ಗೆ ಖರೀದಿಸಿದೆ. * ಈ ಹಡಗನ್ನು ಸಂಪೂರ್ಣವಾಗಿ ಸ್ಕ್ರ್ಯಾಪ್ ಮಾಡಲು 9 ರಿಂದ 12 ತಿಂಗಳ ಸಮಯಾವಕಾಶ ಬೇಕಾಗಬಹುದು.