Job Description: ಭಾರತೀಯ ವಾಯುಪಡೆಯು ಇದೆ ದಿನಾಂಕ 24 ಆಗಸ್ಟ್ 2020 ರಂದು "MY IAF" ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಬಿಸಿತು. ಈ ನೂತನ ಮೊಬೈಲ್ ಅಪ್ಲಿಕೇಶನ್ ಅಭ್ಯರ್ಥಿಗಳಿಗೆ ವೃತ್ತಿ ಸಂಬಂಧಿತ ಮಾಹಿತಿ ಮತ್ತು ಉದ್ಯೋಗ ವಿವರಗಳನ್ನು ಒದಗಿಸಲು ಸಹಕಾರಿಯಾಗಿದೆ. * ಮೊಬೈಲ್ ಅಪ್ಲಿಕೇಶನ್ ಮೂಲಕ ಅಭ್ಯರ್ಥಿಗಳು ನೇಮಕಾತಿಯ ಆಯ್ಕೆ ಪ್ರಕ್ರಿಯೆ, ಪಠ್ಯಕ್ರಮ, ತರಬೇತಿ, ವೇತನ ವಿವರ ಸೇರಿ ಇತರ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ. * ಈ ಮೊಬೈಲ್ ಅಪ್ಲಿಕೇಶನ್ ಆರಂಭಿಸಿರುವುದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಒಂದು ಭಾಗವಾಗಿದ್ದು, "ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ)" ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸಿದೆ.