Job Description: ಉಡುಪಿ : ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 3ರಂತೆ ಭಾರತ ಸರಕಾರದ ಅರಣ್ಯ ಪರಿಸರ ಸಚಿವಾಲಯವು ರಾಜ್ಯದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಲನದ ಪರಿಸರವನ್ನು ಸೂಕ್ಷ್ಮ ವಲಯದ ಗಡಿ ಎಂದು ಗುರುತಿಸಿ ಆದೇಶಿಸಿದೆ. * ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಚಿಕ್ಮಗಳೂರು ಜಿಲ್ಲಾ ವ್ಯಾಪಿಯಲ್ಲಿ ಬರಲಿದ್ದು, ಪಶ್ಚಿಮಘಟ್ಟಗಳ ಹೃದಯಭಾಗದಲ್ಲಿ ಕಂಡುಬರುತ್ತದೆ ಹಾಗಾಗಿ ಯುನೆಸ್ಕೋ ಮಾನ್ಯತೆ ಪಡೆದ 'ವಿಶ್ವ ನೈಸರ್ಗಿಕ ಪರಂಪರೆ' ತಾಣವಾಗಿ ಪರಿಗಣಿಸಲ್ಪಡುತ್ತದೆ. ಇಲ್ಲಿ ಅನೇಕ ಅಳಿವಿನ ಅಂಚಿನಲ್ಲಿರುವ ಹಾಗೂ ಅಪರೂಪದ ಜೀವಿಗಳಾದ ಸಿಂಹ ಬಾಲದ ಕೋತಿ, ಮಲಬಾರ್ ಡ್ಯಾನ್ಸಿಂಗ್ ಕಪ್ಪೆಗಳು, ಅನೇಕ ಸ್ಥಳೀಯ ಆರ್ಕಿಡ್ಗಳು ಮತ್ತು ಇತರೆ ಸ್ಥಳೀಯ ಸಸ್ಯವರ್ಗಗಳು ಕಂಡುಬರುತ್ತವೆ.