Job Description: ಹಾಂಗ್ ಕಾಂಗ್ : ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ ವಿಮಾನಗಳು ಹಾರಾಟ ನಡೆಸುತ್ತಿದ್ದು, ಹಾಂಗ್ ಕಾಂಗ್ ಏರ್ ಇಂಡಿಯಾ ವಿಮಾನಗಳು ಹಾಂಗ್ ಕಾಂಗ್ಗೆ ಆಗಮಿಸುವುದು ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ನಿರ್ಬಂಧ ಹಾಕಿದೆ. * ಕೋವಿಡ್ 19 ಮಾರ್ಗಸೂಚಿಗಳ ಪಾಲನೆಗಾಗಿ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ವಂದೇ ಭಾರತ ಮಿಷನ್: ಕೋರೋಣ ಸೋಂಕಿನಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಿಸಿ ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಕೈಗೊಂಡ ಬೃಹತ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್. - ವಿಶ್ವಮಟ್ಟದಲ್ಲಿ ಕಳೆದ 30 ವರ್ಷಗಳಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ ಇದಾಗಿದೆ. - ಕೇಂದ್ರ ವಿದೇಶಾಂಗ ಇಲಾಖೆಯ ನೀಡಿರುವ ದತ್ತಾಂಶದ ಪ್ರಕಾರ ಇದುವರೆಗೆ 9.5 ಲಕ್ಷ ಭಾರತೀಯರನ್ನು ಕಾರ್ಯಚರಣೆ ಮೂಲಕ ವಾಪಸ್ ಕರೆತರಲಾಗಿದೆ.