Job Description: ಹೊಸದಿಲ್ಲಿ : ರಾಷ್ಟ್ರಪತಿ ರಮಾನಾಥ್ ಕೊವಿಂದ್ ಅವರು ಭಾರತದ ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಒಂದು ದಿನ ಮೊದಲು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು ಹಾಗೂ ಈ ಭಾಷಣವು ದೂರದರ್ಶನದಲ್ಲಿ ಪ್ರಸಾರವಾಯಿತು. ರಾಷ್ಟ್ರಪತಿಗಳು ತಮ್ಮ ಭಾಷಣದ ವೇಳೆ ಪ್ರಮುಖವಾಗಿ ದೇಶದಲ್ಲಿ ವ್ಯಾಪಿಸಿರುವ ಕೊರೋನ ಪಿಡುಗನ್ನು ನಿಯಂತ್ರಿಸಲು ನೆರವು ನೀಡುತ್ತಿರುವ ಕೊರೋನ ವಾರಿಯರ್ಸ್ಗೆ ದೇಶ ಚಿರಋಣಿಯಾಗಿದೆ ಎಂದು ಹೇಳುವ ಮೂಲಕ ಅವರಿಗೆ ಅಭಿನಂದನೆ ತಿಳಿಸಿದರು.