Job Description: ಪೋರ್ಟ್ಲ್ಯಾಂಡ್: ಕಂಪ್ಯೂಟರ್ ವಿಜ್ಞಾನಿಯಾಗಿರುವ ಹಾಗೂ ಪಿಕ್ಸೆಲ್ ಸೃಷ್ಟಿಕರ್ತ ರಸಲ್ ಕಿರ್ಶ್ ಅವರು ತಮ್ಮ 91 ನೇ ವಯಸ್ಸಿನಲ್ಲಿ ಆಗಸ್ಟ್ 11ರಂದು ಒರಗನ್ನ ಪೋರ್ಟ್ಲ್ಯಾಂಡ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. * ಇವರು 1957ರಲ್ಲಿ ತಮ್ಮ ಮಗ ವಾಲ್ಡೆನ್ನ ಡಿಜಿಟಲ್ ಚಿತ್ರವನ್ನು ಸೃಷ್ಟಿಸಿದ್ದರು. ಈ ಚಿತ್ರವು ಎರಡು ಇಂಚು ಉದ್ದ ಮತ್ತು ಅಗಲವಾಗಿದ್ದು, ಕಪ್ಪುಬಿಳುಪಿನದಾಗಿತ್ತು. ಈ ಮೂಲಕ ಜಗತ್ತಿಗೆ ಪಿಕ್ಸೆಲ್ಸ್ ಎನ್ನುವ ಹೊಸ ಕಲ್ಪನೆ ಪರಿಚಯವಾಯಿತು. * ಪಿಕ್ಸೆಲ್ : ಡಿಜಿಟಲ್ ಚುಕ್ಕೆಗಳ ಮುಖಾಂತರ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯಲ್ಲಿ ಚಿತ್ರಗಳನ್ನು ಸೃಷ್ಟಿಸುವುದು.